Thursday, August 25, 2016

Hogi Baa Belake

ಹೋಗಿ ಬಾ ಬೆಳಕೇ....  























ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ... 

ಕಮರಿ ಹೋದರು ಹಚ್ಚಿಟ್ಟೆ ಹಣತೆ,
ಕರಗಿ ಹೋಗಿಯೂ ಕಟ್ಟಿಟ್ಟೆ ಮಮತೆ,
ಇನ್ನಾದರೂ ಸಿಗಲಿ ಇರುಳಿನ ತಾರಕಕ್ಕೆ ನಿಲುಗಡೆಯ ಬೆಳಕೂ .. 

ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 

ಸರಿದು ಹೋಗಲಿ ಬಚ್ಚಿಟ್ಟ ಮೌನ,
ಹರಿದು ಹೋಗಲಿ ಮುಚ್ಚಿಟ್ಟ ಮಾತು,
ಇನ್ನಾದರೂ ಬರಲಿ ಆತ್ಮದ ಬಂಧನಕ್ಕೆ ಬಿಡುಗಡೆಯ ಬೆಳಕೂ.... 


ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ... 


Sariyaagi Nenapide Nanage Lyrics

ಸರಿಯಾಗಿ ನೆನಪಿದೆ ನನಗೇ...  




















ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ ,
ಮನದ ಪ್ರತಿ ಗಲ್ಲಿ ಒಳಗು, ನಿನದೆ ಮೆರವಣಿಗೆ,
ಕನಸಿನ ಕುಲುಮೆಗೆ ಉಸಿರನು  ಊದುತ, ಕಿಡಿ ಹಾರುವುದು ಇನ್ನು ಖಚಿತ .. 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ಕಣ್ಣಲ್ಲೇ ಇದೆ ಎಲ್ಲ ಕಾಗದ, ನೀನೆ ನನ್ನಯ ಅಂಚೆ ಪೆಟ್ಟಿಗೆ,
ಏನೇ ಕಂಡರೂ ನೀನೆ ಜ್ಞಾಪಕ, ನೀನೆ ಔಷಧಿ ನನ್ನ ಹುಚ್ಚಿಗೇ ,
ತೆರೆದೂ  ನೀನು ಮುದ್ದಾದ ಅಧ್ಯಾಯ , 
ಸಿಗದೇ ಇದ್ರೆ  ತುಂಬಾನೇ ಅನ್ಯಾಯ , 
ನನ್ನಯ ನಡೆ ನುಡಿ ನಿನ್ನನ್ನೇ ಬಯಸುತ,
ಬದಲಾಗುವುದು ಇನ್ನು ಖಚಿತ .... 


ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗ ಸಜ್ಜಿಗೆ ,
ನಿನ್ನ ನೋಡದ ನನ್ನ ಜೀವನ ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ,
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು ಸರಸಕ್ಕೀಗ ನಿಂದೇನೇ ಕಾನೂನು,
ತೊರೆಯುವ ನೆನಪಲಿ ಇರುಳನು ಕಳೆಯುತಾ ,
ಬೆಳಗಾಗುವುದು ಇನ್ನು ಖಚಿತ..... 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 




Sunday, May 22, 2016

Arey Arey Enaitu lyrics

ಅರೇ ಅರೇ ಏನೈತು......







ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ


ಅರೇ ಅರೇ ಏನೈತು ಅರೇ ಅರೇ ಅರೇ ಏನೈತು
ಹೃದಯ ಎಲ್ಲೋ ಹಾರೋಯ್ತು ಎಲೆ ಎಲೆ ಎಲೆ ಹೂವಯ್ತು...

ಅರೇ ಅರೇ ಏನೈತು ಅರೇ ಅರೇ ಅರೇ.....

ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ..
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ.....

ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

ಅರೇ ಅರೇ ಏನೈತು ಅರೇ ಅರೇ ಅರೇ ಏನೈತು
ಹೃದಯ ಎಲ್ಲೋ ಹಾರೋಯ್ತು ಎಲೆ ಎಲೆ ಎಲೆ ಹೂವಯ್ತು...

ಅರೇ ಅರೇ ಏನೈತು ಅರೇ ಅರೇ ಅರೇ.....

ಯಾರಿಲ್ಲ ಯಾರಿಲ್ಲ ನಿನ್ನ ಹಾಗೆ ಯಾರಿಲ್ಲ,
ನನ್ನಂತೂ ಹೀಗೆಲ್ಲ ಬೇರೆ ಯಾರು ಕಾಡಿಲ್ಲ ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ....


ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ


ಮಿರ ಮಿರ ನೀ ನಕ್ಕಾಗ ಮುದ್ದಾಗಿ ಹೀಗೆ,
ಗಿರ ಗಿರ ಈ ತಲೆಯೆಲ್ಲ ಯಾಕೋ ನಂಗೆ,
ತರ ತರ ನೀ ನನ್ನನ್ನೇ ಕಾಡೊದು ಯಾಕೆ,
ನೀ ಪೂರ ಪೂರ ಬೇಕು ನಂಗ್ ನಂಗೆ.....

ರೋಮೀಯೋ ರೋಮೀಯೋ ನೀನೇ ನನ್ನ ಪ್ರೇಮಿಯೋ,
ರೋಮೀಯೋ ರೋಮೀಯೋ ನಾನೇ ನಿನ್ನ ರಾಣಿಯೊ.....

ಕಮ್ ಪಾರ್ಟೀ ಕಮ್ ಪಾರ್ಟೀ........

ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ,
ಸರ ಸರ ಈ ಮೈಯೆಲ್ಲ ರೋಮಾಂಚನ,
ಘಮ ಘಮ ಈ ಮನಸೆಲ್ಲ ನೀ ಬಂದಮೇಲೆ,
ಅಮ್ಮಮ್ಮ ಏನೇ ನಿನ್ನ ಈ ಲೀಲೆ....

ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ,
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ....


ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

 

 


Monday, May 16, 2016

Nillu Nillu Onde Nimisha...

ನಿಲ್ಲು ನಿಲ್ಲು ಒಂದೇ ನಿಮಿಷ...... 







ನಿಲ್ಲು ನಿಲ್ಲು ಒಂದೇ ನಿಮಿಷ, ಕೊಟ್ಟೆ ಹೃದಯ ನಿನಗೆ,
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ,
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ....

ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ,
ನೀ ಹೂ ಅಂದರೆ ತುಂಬಾನೇ ಉಪಕಾರ...  (x2)

ನಿನ್ನೋಳಗೇನೆ  ಬೆಳಕೊಂದು ಮನೆ ಮಾಡಿದೆ,
ಮುಂಗುರುಳಲ್ಲಿ  ಬೆರಳೀಗ  ಸೆರೆಯಾಗಿದೆ,
ಬಡ ಜೀವ ಮಿಡಿವಾಗ ತಡವಿನ್ನೆತಕೆ,
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ,
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೆಗೆ ,

ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ,
ನೀ ಹೂ ಅಂದರೆ ತುಂಬಾನೇ ಉಪಕಾರ ... (x2)

ನನ್ನೆದೆಯಲ್ಲಿ ದಿನ ರಾತ್ರಿ ರಸ ಮಂಜರಿ,
ನೀನಿರುವಂತ ಕನಸೆಲ್ಲ ನನಗೆ ಸರಿ,
ತುಟಿಗಿಂತ ಮೊದಲೇನೆ ಮನ ಮಾತಾಡುತ,
ಭಯವೆಲ್ಲ ಒಲವಲ್ಲಿ ಮರೆತೇ ಹೋಯಿತಾ,
ನನ್ನೆಲ್ಲ ಹಾರಾಟ ನೀ ಸಿಕ್ಕೊವರೆಗೆ,

ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ,
ನೀ ಹೂ ಅಂದರೆ ತುಂಬಾನೇ ಉಪಕಾರ......  (x2)

Tuesday, December 8, 2015

Manave Lyrics

ಮನವೇ.....

















ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು..

ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,

ಮರೆತು ನನ್ನೇ ಮುರಿದು ಆಣೆ,
ಸರಿದೆ ದೂರ ಸರಿಯೇ?
ಕನಸ ಹಾಗೆ ಕರಗೊದೇಕೆ
ಒಲವೆ ನೀನು ಬರೀ ಮಾಯೆಯೇ,
ನಾನೊಬ್ಬನೇ ನಿಂತಿದ್ದರೆ, ಗಾಳಿ ಮರ ನೀರುತೆರೆ,
ಕೇಳುತ್ತಿವೆ ನಿನ್ನನ್ನೇ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,

ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,

ಎದೆಯ ಇಚ್ಛೆ ಬರೆದ ಅಂಚೆ
ಕಲಿಸೋದಿಂತು ನಿನಗೆ,
ಮುನಿದ ಸಂಜೆ ಮುಗಿವ ಮುಂಚೆ,
ಜೊತೆ ಸೇರೋಣ ಹೊಸ ಬಾಳಿಗೆ,
ನಿನ್ನ ಬಳಿ ಬರಲಾರೆನು, ದೂರಾಗಿಯೂ ಇರಲಾರೆನು,
ನಾ ಕಾಣೆನು ಮುಂದೇನು,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,

ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ...............



Tuesday, November 3, 2015

Odi bandenu Lyrics

ಓಡಿ ಬಂದೆನು...





















ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,

ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ,

ನೋರೊಂದು ಬಾರಿ ಹರಿದು, ನಾ ಬರೆದ ಓಲೆಯ,
ತುಸುವಾದರೂ ತೆರೆದೊದದೆ, ನೀ ಹಾಗೆ ಹೋದೆಯಾ?
ಕರೆಯೊಂದ ಮಾಡಿಬಿಡಲೆ ಎದೆಯಿಂದ ಈಗಲೇ,
ಪದವಿಲ್ಲದೆ, ಸ್ವರವಿಲ್ಲದೆ ನಿನ್ನನ್ನು ಕೂಗಲೆ,
ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ?

ಕನಸಿಂದ ಚಾಪಿಸಿರುವೆ ಈ ಮನದ ಸಂಚಿಕೆ,
ಮುಖಪುಟವನು ನೀ ನೋಡದೆ, ಮರೆಯಾದೆ ಏತಕೆ,
ನೆನಪಿಂದ ರೂಪಿಸಿರುವೆ ನವಿರಾದ ಸೇತುವೆ,
ನಿನಗಾಗಿಯೇ ಅಣಿಮಾಡುತ, ನಾನಂತೂ ಕಾಯುವೆ,

ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,


Friday, October 30, 2015

No Problem Lyrics

ನೋ ಪ್ರಾಬ್ಲಮ್...





















ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ,
ನಿನ್ ನಗು ನೋಡ್ ಬಿಟ್ಟು ಬಲ್ಬು ಆಫ್ ಆಗೋಯ್ತು,

ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...

ಕೇಳೆ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್,
ನೀನೇ ನನ್ನ ಸೂಪರ್ ಸ್ಟಾರ್,
ನಾನೇ ನಿನ್ನ ರಾಜಕುಮಾರೆ,

ನೋ ಪ್ರಾಬ್ಲಮ್ ನಿನ್ನ ಹೈಟು ಸ್ವಲ್ಪ ಜಾಸ್ತಿನೆನೊ,
ನೋ ಪ್ರಾಬ್ಲಮ್ ನಿನ್ನ ವೇಟಿಂಗ್ ಲಿಸ್ಟಲ್ಲಿ ನಾನಿದ್ರೂನೂ,
ನೋ ಪ್ರಾಬ್ಲಮ್ ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ಲಾಂಗು ಅಲ್ಲೇ ನಾನು ಜಾಂಡ ಹೂಡ್ತೀನೇ....


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...

ಲವ್ವು ಸ್ಕೂಲಿಗೆ ನೀ ಟೀಚರ್ ಆದರೆ,
ಫ್ರೊಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ,
ರಾಮಂಗಾಗಿ ಸೀತಾ ಶಿವುಗಾಗಿ ಗೀತಾ,
ನಂಗೆ ನೀನು ಸ್ವಂತ, ಬಾ ಮಿಲ್ಟ್ರಿ ಹೋಟ್ಲಲ್ಲಿ ಮುದ್ದೆ ತಿನ್ನೋಣ,

ನೋ ಪ್ರಾಬ್ಲಮ್ ನಿಂಗೆ ಫ್ಲ್ಯಾಶ್ ಬ್ಯಾಕು ಇದ್ರು
ನೋ ಪ್ರಾಬ್ಲಮ್ ನನ್ನ ಎಟಿಮ್ ಮಾಡ್ಕೊಂಡ್ರು
ನೋ ಪ್ರಾಬ್ಲಮ್ ನಿನ್ನ ಮಮ್ಮೀ ಡ್ಯಾಡೀ ನೋ ಅಂದ್ರುನೂ,
ಅವರ ಕಾಲೀಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ,


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ,             ಡಿ...


ನಿನ್ನ ಸೆಲ್ಲಿಗೆ ನಾ ಹೆಡ್‌ಫೋನ್ ಆಗುವೆ,
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ,
ಸಪೋನೋಕಿ ರಾಣಿ ಹತ್ತು ನನ್ನ ದೋಣಿ,
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ...


ನೋ ಪ್ರಾಬ್ಲಮ್ ನಿನ್ನ ಕಲರ್ ಸ್ವಲ್ಪ ಜಾಸ್ತಿನೇ,
ನೋ ಪ್ರಾಬ್ಲಮ್ ನೀ ಅರೇಬೀಯನ್ ಟಗರಾದ್ರು,
ನೋ ಪ್ರಾಬ್ಲಮ್ ನೀನು ಒಪ್ಡೇ ಇಪ್ಡೆ ಇದ್ಬುಟ್ರೆ
ನಾನು ಟೀವೀ ನೈನ್ ಲೈವಲ್ಲಿ ಕೂತು ಬಾಯ್ ಬಡ್ಕೋತೀನೆ...


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...