Thursday, August 25, 2016

Sariyaagi Nenapide Nanage Lyrics

ಸರಿಯಾಗಿ ನೆನಪಿದೆ ನನಗೇ...  




















ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ ,
ಮನದ ಪ್ರತಿ ಗಲ್ಲಿ ಒಳಗು, ನಿನದೆ ಮೆರವಣಿಗೆ,
ಕನಸಿನ ಕುಲುಮೆಗೆ ಉಸಿರನು  ಊದುತ, ಕಿಡಿ ಹಾರುವುದು ಇನ್ನು ಖಚಿತ .. 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ಕಣ್ಣಲ್ಲೇ ಇದೆ ಎಲ್ಲ ಕಾಗದ, ನೀನೆ ನನ್ನಯ ಅಂಚೆ ಪೆಟ್ಟಿಗೆ,
ಏನೇ ಕಂಡರೂ ನೀನೆ ಜ್ಞಾಪಕ, ನೀನೆ ಔಷಧಿ ನನ್ನ ಹುಚ್ಚಿಗೇ ,
ತೆರೆದೂ  ನೀನು ಮುದ್ದಾದ ಅಧ್ಯಾಯ , 
ಸಿಗದೇ ಇದ್ರೆ  ತುಂಬಾನೇ ಅನ್ಯಾಯ , 
ನನ್ನಯ ನಡೆ ನುಡಿ ನಿನ್ನನ್ನೇ ಬಯಸುತ,
ಬದಲಾಗುವುದು ಇನ್ನು ಖಚಿತ .... 


ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗ ಸಜ್ಜಿಗೆ ,
ನಿನ್ನ ನೋಡದ ನನ್ನ ಜೀವನ ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ,
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು ಸರಸಕ್ಕೀಗ ನಿಂದೇನೇ ಕಾನೂನು,
ತೊರೆಯುವ ನೆನಪಲಿ ಇರುಳನು ಕಳೆಯುತಾ ,
ಬೆಳಗಾಗುವುದು ಇನ್ನು ಖಚಿತ..... 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 




No comments:

Post a Comment