ಹೋಗಿ ಬಾ ಬೆಳಕೇ....
ಹೋಗಿ ಬಾ ಬೆಳಕೇ ಹೋಗಿ ಬಾ....
ಹೋಗಿ ಬಾ ಬೆಳಕೇ ಹೋಗಿ ಬಾ....
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ...
ಕಮರಿ ಹೋದರು ಹಚ್ಚಿಟ್ಟೆ ಹಣತೆ,
ಕರಗಿ ಹೋಗಿಯೂ ಕಟ್ಟಿಟ್ಟೆ ಮಮತೆ,
ಇನ್ನಾದರೂ ಸಿಗಲಿ ಇರುಳಿನ ತಾರಕಕ್ಕೆ ನಿಲುಗಡೆಯ ಬೆಳಕೂ ..
ಹೋಗಿ ಬಾ ಬೆಳಕೇ ಹೋಗಿ ಬಾ....
ಹೋಗಿ ಬಾ ಬೆಳಕೇ ಹೋಗಿ ಬಾ....
ಸರಿದು ಹೋಗಲಿ ಬಚ್ಚಿಟ್ಟ ಮೌನ,
ಹರಿದು ಹೋಗಲಿ ಮುಚ್ಚಿಟ್ಟ ಮಾತು,
ಇನ್ನಾದರೂ ಬರಲಿ ಆತ್ಮದ ಬಂಧನಕ್ಕೆ ಬಿಡುಗಡೆಯ ಬೆಳಕೂ....
ಹೋಗಿ ಬಾ ಬೆಳಕೇ ಹೋಗಿ ಬಾ....
ಹೋಗಿ ಬಾ ಬೆಳಕೇ ಹೋಗಿ ಬಾ....
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ...
No comments:
Post a Comment