ನಿಲ್ಲು ನಿಲ್ಲು ಒಂದೇ ನಿಮಿಷ......
ನಿಲ್ಲು ನಿಲ್ಲು ಒಂದೇ ನಿಮಿಷ, ಕೊಟ್ಟೆ ಹೃದಯ ನಿನಗೆ,
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ,
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ....
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ,
ನೀ ಹೂ ಅಂದರೆ ತುಂಬಾನೇ ಉಪಕಾರ... (x2)
ನಿನ್ನೋಳಗೇನೆ ಬೆಳಕೊಂದು ಮನೆ ಮಾಡಿದೆ,
ಮುಂಗುರುಳಲ್ಲಿ ಬೆರಳೀಗ ಸೆರೆಯಾಗಿದೆ,
ಬಡ ಜೀವ ಮಿಡಿವಾಗ ತಡವಿನ್ನೆತಕೆ,
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ,
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೆಗೆ ,
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ,
ನೀ ಹೂ ಅಂದರೆ ತುಂಬಾನೇ ಉಪಕಾರ ... (x2)
ನನ್ನೆದೆಯಲ್ಲಿ ದಿನ ರಾತ್ರಿ ರಸ ಮಂಜರಿ,
ನೀನಿರುವಂತ ಕನಸೆಲ್ಲ ನನಗೆ ಸರಿ,
ತುಟಿಗಿಂತ ಮೊದಲೇನೆ ಮನ ಮಾತಾಡುತ,
ಭಯವೆಲ್ಲ ಒಲವಲ್ಲಿ ಮರೆತೇ ಹೋಯಿತಾ,
ನನ್ನೆಲ್ಲ ಹಾರಾಟ ನೀ ಸಿಕ್ಕೊವರೆಗೆ,
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ,
ನೀ ಹೂ ಅಂದರೆ ತುಂಬಾನೇ ಉಪಕಾರ...... (x2)
ನನ್ನ ನೆಚ್ಚಿನ ಹಾಡು even my caller tune
ReplyDelete