ಮನವೇ.....
ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು..
ಮರಳಿ ಕೊಡಿಸೊ ಕಳೆದ ಒಲವ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು..
ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,
ಮರಳಿ ಕೊಡಿಸೊ ಕಳೆದ ಒಲವ,
ಮರೆತು ನನ್ನೇ ಮುರಿದು ಆಣೆ,
ಸರಿದೆ ದೂರ ಸರಿಯೇ?
ಕನಸ ಹಾಗೆ ಕರಗೊದೇಕೆ
ಒಲವೆ ನೀನು ಬರೀ ಮಾಯೆಯೇ,
ನಾನೊಬ್ಬನೇ ನಿಂತಿದ್ದರೆ, ಗಾಳಿ ಮರ ನೀರುತೆರೆ,
ಕೇಳುತ್ತಿವೆ ನಿನ್ನನ್ನೇ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,
ಸರಿದೆ ದೂರ ಸರಿಯೇ?
ಕನಸ ಹಾಗೆ ಕರಗೊದೇಕೆ
ಒಲವೆ ನೀನು ಬರೀ ಮಾಯೆಯೇ,
ನಾನೊಬ್ಬನೇ ನಿಂತಿದ್ದರೆ, ಗಾಳಿ ಮರ ನೀರುತೆರೆ,
ಕೇಳುತ್ತಿವೆ ನಿನ್ನನ್ನೇ,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,
ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ,
ಮರಳಿ ಕೊಡಿಸೊ ಕಳೆದ ಒಲವ,
ಎದೆಯ ಇಚ್ಛೆ ಬರೆದ ಅಂಚೆ
ಕಲಿಸೋದಿಂತು ನಿನಗೆ,
ಮುನಿದ ಸಂಜೆ ಮುಗಿವ ಮುಂಚೆ,
ಜೊತೆ ಸೇರೋಣ ಹೊಸ ಬಾಳಿಗೆ,
ನಿನ್ನ ಬಳಿ ಬರಲಾರೆನು, ದೂರಾಗಿಯೂ ಇರಲಾರೆನು,
ನಾ ಕಾಣೆನು ಮುಂದೇನು,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,
ಕಲಿಸೋದಿಂತು ನಿನಗೆ,
ಮುನಿದ ಸಂಜೆ ಮುಗಿವ ಮುಂಚೆ,
ಜೊತೆ ಸೇರೋಣ ಹೊಸ ಬಾಳಿಗೆ,
ನಿನ್ನ ಬಳಿ ಬರಲಾರೆನು, ದೂರಾಗಿಯೂ ಇರಲಾರೆನು,
ನಾ ಕಾಣೆನು ಮುಂದೇನು,
ತಡೆದಷ್ಟೂ ಬರೋ ಅಳುವನ್ನು ನಿಲ್ಲಿಸು,
ಹಿಡಿಯಷ್ಟು ಇರೋ ಹೃದಯಾನ ಒಮ್ಮೆ ಚುಂಬಿಸು,
ಮನವೇ ತೆರೆಸೋ ಎದೆಯ ಕದವ,
ಮರಳಿ ಕೊಡಿಸೊ ಕಳೆದ ಒಲವ...............
ಮರಳಿ ಕೊಡಿಸೊ ಕಳೆದ ಒಲವ...............
No comments:
Post a Comment