Thursday, August 25, 2016

Hogi Baa Belake

ಹೋಗಿ ಬಾ ಬೆಳಕೇ....  

ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ... 

ಕಮರಿ ಹೋದರು ಹಚ್ಚಿಟ್ಟೆ ಹಣತೆ,
ಕರಗಿ ಹೋಗಿಯೂ ಕಟ್ಟಿಟ್ಟೆ ಮಮತೆ,
ಇನ್ನಾದರೂ ಸಿಗಲಿ ಇರುಳಿನ ತಾರಕಕ್ಕೆ ನಿಲುಗಡೆಯ ಬೆಳಕೂ .. 

ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 

ಸರಿದು ಹೋಗಲಿ ಬಚ್ಚಿಟ್ಟ ಮೌನ,
ಹರಿದು ಹೋಗಲಿ ಮುಚ್ಚಿಟ್ಟ ಮಾತು,
ಇನ್ನಾದರೂ ಬರಲಿ ಆತ್ಮದ ಬಂಧನಕ್ಕೆ ಬಿಡುಗಡೆಯ ಬೆಳಕೂ.... 

ಹೋಗಿ ಬಾ ಬೆಳಕೇ ಹೋಗಿ ಬಾ.... 
ಹೋಗಿ ಬಾ ಬೆಳಕೇ ಹೋಗಿ ಬಾ.... 
ಎದೆ ಹಾಲು ಉಣಿಸದೆ ತಾಯಾದ ಬೆಳಕೇ,
ಎದೆ ನೋವಾ ಉಗುಳದೆ ಮಗುವಾದ ಬೆಳಕೇ ... 

Sariyaagi Nenapide Nanage Lyrics

ಸರಿಯಾಗಿ ನೆನಪಿದೆ ನನಗೇ...  

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ ,
ಮನದ ಪ್ರತಿ ಗಲ್ಲಿ ಒಳಗು, ನಿನದೆ ಮೆರವಣಿಗೆ,
ಕನಸಿನ ಕುಲುಮೆಗೆ ಉಸಿರನು  ಊದುತ, ಕಿಡಿ ಹಾರುವುದು ಇನ್ನು ಖಚಿತ .. 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ಕಣ್ಣಲ್ಲೇ ಇದೆ ಎಲ್ಲ ಕಾಗದ, ನೀನೆ ನನ್ನಯ ಅಂಚೆ ಪೆಟ್ಟಿಗೆ,
ಏನೇ ಕಂಡರೂ ನೀನೆ ಜ್ಞಾಪಕ, ನೀನೆ ಔಷಧಿ ನನ್ನ ಹುಚ್ಚಿಗೇ ,
ತೆರೆದೂ  ನೀನು ಮುದ್ದಾದ ಅಧ್ಯಾಯ , 
ಸಿಗದೇ ಇದ್ರೆ  ತುಂಬಾನೇ ಅನ್ಯಾಯ , 
ನನ್ನಯ ನಡೆ ನುಡಿ ನಿನ್ನನ್ನೇ ಬಯಸುತ,
ಬದಲಾಗುವುದು ಇನ್ನು ಖಚಿತ .... 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗ ಸಜ್ಜಿಗೆ ,
ನಿನ್ನ ನೋಡದ ನನ್ನ ಜೀವನ ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ,
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು ಸರಸಕ್ಕೀಗ ನಿಂದೇನೇ ಕಾನೂನು,
ತೊರೆಯುವ ನೆನಪಲಿ ಇರುಳನು ಕಳೆಯುತಾ ,
ಬೆಳಗಾಗುವುದು ಇನ್ನು ಖಚಿತ..... 

ಸರಿಯಾಗಿ ನೆನಪಿದೆ ನನಗೇ , ಇದಕೆಲ್ಲ ಕಾರಣ ಕಿರುನಗೆ .... 

Sunday, May 22, 2016

Arey Arey Enaitu lyrics

ಅರೇ ಅರೇ ಏನೈತು......

ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

ಅರೇ ಅರೇ ಏನೈತು ಅರೇ ಅರೇ ಅರೇ ಏನೈತು
ಹೃದಯ ಎಲ್ಲೋ ಹಾರೋಯ್ತು ಎಲೆ ಎಲೆ ಎಲೆ ಹೂವಯ್ತು...

ಅರೇ ಅರೇ ಏನೈತು ಅರೇ ಅರೇ ಅರೇ.....

ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ..
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ.....

ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

ಅರೇ ಅರೇ ಏನೈತು ಅರೇ ಅರೇ ಅರೇ ಏನೈತು
ಹೃದಯ ಎಲ್ಲೋ ಹಾರೋಯ್ತು ಎಲೆ ಎಲೆ ಎಲೆ ಹೂವಯ್ತು...

ಅರೇ ಅರೇ ಏನೈತು ಅರೇ ಅರೇ ಅರೇ.....

ಯಾರಿಲ್ಲ ಯಾರಿಲ್ಲ ನಿನ್ನ ಹಾಗೆ ಯಾರಿಲ್ಲ,
ನನ್ನಂತೂ ಹೀಗೆಲ್ಲ ಬೇರೆ ಯಾರು ಕಾಡಿಲ್ಲ ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ....

ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

ಮಿರ ಮಿರ ನೀ ನಕ್ಕಾಗ ಮುದ್ದಾಗಿ ಹೀಗೆ,
ಗಿರ ಗಿರ ಈ ತಲೆಯೆಲ್ಲ ಯಾಕೋ ನಂಗೆ,
ತರ ತರ ನೀ ನನ್ನನ್ನೇ ಕಾಡೊದು ಯಾಕೆ,
ನೀ ಪೂರ ಪೂರ ಬೇಕು ನಂಗ್ ನಂಗೆ.....

ರೋಮೀಯೋ ರೋಮೀಯೋ ನೀನೇ ನನ್ನ ಪ್ರೇಮಿಯೋ,
ರೋಮೀಯೋ ರೋಮೀಯೋ ನಾನೇ ನಿನ್ನ ರಾಣಿಯೊ.....

ಕಮ್ ಪಾರ್ಟೀ ಕಮ್ ಪಾರ್ಟೀ........

ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ,
ಸರ ಸರ ಈ ಮೈಯೆಲ್ಲ ರೋಮಾಂಚನ,
ಘಮ ಘಮ ಈ ಮನಸೆಲ್ಲ ನೀ ಬಂದಮೇಲೆ,
ಅಮ್ಮಮ್ಮ ಏನೇ ನಿನ್ನ ಈ ಲೀಲೆ....

ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ,
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ,

ಓಹೋ ಎಲ್ಲೆ ಹೋಗಲಿ ನಿಂದೆ ಹಾವಳಿ,
ನನ್ನ ಜೀವನ ನಿನ್ನ ಕೈಲಿ....

ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ..
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ
ಪಾರ್ಟೀ...
ಕಮ್ ಪಾರ್ಟೀ ಕಮ್ ಪಾರ್ಟೀ ಪಾರ್ಟೀ ಪಾರ್ಟೀ ಪಾರ್ಟೀ

Monday, May 16, 2016

Nillu Nillu Onde Nimisha...

ನಿಲ್ಲು ನಿಲ್ಲು ಒಂದೇ ನಿಮಿಷ...... 

ನಿಲ್ಲು ನಿಲ್ಲು ಒಂದೇ ನಿಮಿಷ, ಕೊಟ್ಟೆ ಹೃದಯ ನಿನಗೆ,
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ,
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ....

ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ,
ನೀ ಹೂ ಅಂದರೆ ತುಂಬಾನೇ ಉಪಕಾರ...  (x2)

ನಿನ್ನೋಳಗೇನೆ  ಬೆಳಕೊಂದು ಮನೆ ಮಾಡಿದೆ,
ಮುಂಗುರುಳಲ್ಲಿ  ಬೆರಳೀಗ  ಸೆರೆಯಾಗಿದೆ,
ಬಡ ಜೀವ ಮಿಡಿವಾಗ ತಡವಿನ್ನೆತಕೆ,
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ,
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೆಗೆ ,

ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ,
ನೀ ಹೂ ಅಂದರೆ ತುಂಬಾನೇ ಉಪಕಾರ ... (x2)

ನನ್ನೆದೆಯಲ್ಲಿ ದಿನ ರಾತ್ರಿ ರಸ ಮಂಜರಿ,
ನೀನಿರುವಂತ ಕನಸೆಲ್ಲ ನನಗೆ ಸರಿ,
ತುಟಿಗಿಂತ ಮೊದಲೇನೆ ಮನ ಮಾತಾಡುತ,
ಭಯವೆಲ್ಲ ಒಲವಲ್ಲಿ ಮರೆತೇ ಹೋಯಿತಾ,
ನನ್ನೆಲ್ಲ ಹಾರಾಟ ನೀ ಸಿಕ್ಕೊವರೆಗೆ,

ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ,
ನೀ ಹೂ ಅಂದರೆ ತುಂಬಾನೇ ಉಪಕಾರ......  (x2)