ನೀ ಜೊತೆ ಇರು ದಿನ ದಿನ ದಿನ....
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ಚಂದುಳ್ಳಿ ಚೆಲುವೆ ನೀನು, ಒಂದೊಳ್ಳೆ ಕನಸು ನೀನು,
ನಿನ್ನಲ್ಲೇ ಕಳೆದು ಹೋದೆ, ಏನಂತ ಹುಡುಕಲಿ ನಾನು,
ಒಲವೆಂಬ ಕವನ ನೀನು, ಓದೋಕೆ ಬಂದವ ನಾನು,
ಕಣ್ಣಲ್ಲಿ ಕಣ್ಣು ಇಟ್ಟು ಕಾಯುವೆ ನಿನ್ನ ನಾನು,
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ಏನು ಮಾಡಲಿ ನಿನ್ನ ನೋಡುತ ಏನೋ ಆಗಿದೆ,
ಹೇಗೆ ಹೇಳಲಿ ಎಲ್ಲ ಮಾತಲು ಪ್ರೀತಿ ಆಗಿದೆ,
ನಿನ್ನ ನೋಡುವ ಕಣ್ಣು ಎಂದು ಮುಚ್ಚದೆ ಇರಲಿ,
ಅಪ್ಪಿ ತಪ್ಪಿಯೂ ಅದರ ದಾರಿ ತಪ್ಪದೆ ಇರಲಿ,
ನನಗೆ ಸಿಗುವ ಉಸಿರೊಳಗೆ ಅತಿ ಆಗು ನೀನೇ,
ಬದುಕು ಕಳೆಯೋ ದಿನಗಳಿಗೆ ಜೊತೆಯಾಗು ನೀನೇ..
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ನನ್ನ ಜೊತೆ ಇರು ದಿನ ದಿನ,
ಏನು ಪುಣ್ಯವು ನಿನ್ನ ನೋಡುವ ಭಾಗ್ಯ ಸಿಕ್ಕಿದೆ,
ಹೆಜ್ಜೆ ಹೆಜ್ಜೆಗೂ ಪ್ರೀತಿ ಮಾಡುವ ಧೈರ್ಯ ಬಂದಿದೆ,
ನೋಡಿ ಒಪ್ಪಿದ ಹೃದಯ, ಎಂದು ಹತ್ತಿರ ಇರಲಿ,
ಅಳತೆ ಸಿಗದೆ ಇರುವ, ಪ್ರೀತಿ ಹಾಗೆಯೇ ಇರಲಿ,
ನಿನಗೂ ನನಗೂ ಉಡುಗೊರೆಯು ಈ ಪ್ರೀತಿ ತಾನೇ,
ಎಲ್ಲ ಇರುವ ಧರೆಯೊಳಗೂ ನನಗೆಲ್ಲಾ ನೀನೇ,
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ನನ್ನ ಜೊತೆ ಇರು ದಿನ ದಿನ,
No comments:
Post a Comment