Wednesday, October 21, 2015

Karnatakada Itihaasadali Lyrics

ಕರ್ನಾಟಕದ ಇತಿಹಾಸದಲಿ....



ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಕರ್ನಾಟಕದ ಇತಿಹಾಸದಲಿ .....

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿ ಇದು, (x2)
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು, ವಿಜಯನಗರ ಸ್ಥಾಪನೆ ಮಾಡಿದರು...

ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಹಾಡುವೆ ಕೇಳಿ ನಾ ಹಾಡುವೆ ಕೇಳಿ..

ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವತೆ, (x2)
ಕಲಿಗಳ ನಾಡು ಕವಿಗಳ ಬೀಡು,(x2)
ಎನಿಸಿತು ಹಂಪೆಯು ಆ ದಿನದೇ..
ಕನ್ನಡ ಬಾವುಟ ಹಾರಿಸಿದ, ಮದುರೆವರೆಗೂ ರಾಜ್ಯವ ಹರಡಿಸಿದ,

ಕರ್ನಾಟಕದ ಇತಿಹಾಸದಲಿ.....

ಸಂಗೀತ ನಾಟ್ಯಗಳ ಸಂಗಮವಿಲ್ಲೆ, ಶಿಲ್ಪ ಕಲೆಗಳ ತಾಣವಿದೆ (x2)
ಭುವನೇಶ್ವರಿಯ ತವರೂರಿಲ್ಲೆ, ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು, ಯುಗ ಯುಗ ಅಳಿಯದ ಕೀರ್ತಿ ಇದು...

ಕನ್ನಡ ಭೂಮಿ ...ಕನ್ನಡ ನುಡಿಯು ..ಕನ್ನಡ ಪ್ರೀತಿ ..ಎಂದೆಂದೂ ಬಾಳಲಿ..

ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ..... ಸಿರಿಗನ್ನಡಂ ಗೆಲ್ಗೆ.....

No comments:

Post a Comment