Friday, October 30, 2015

No Problem Lyrics

ನೋ ಪ್ರಾಬ್ಲಮ್...





















ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ,
ನಿನ್ ನಗು ನೋಡ್ ಬಿಟ್ಟು ಬಲ್ಬು ಆಫ್ ಆಗೋಯ್ತು,

ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...

ಕೇಳೆ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್,
ನೀನೇ ನನ್ನ ಸೂಪರ್ ಸ್ಟಾರ್,
ನಾನೇ ನಿನ್ನ ರಾಜಕುಮಾರೆ,

ನೋ ಪ್ರಾಬ್ಲಮ್ ನಿನ್ನ ಹೈಟು ಸ್ವಲ್ಪ ಜಾಸ್ತಿನೆನೊ,
ನೋ ಪ್ರಾಬ್ಲಮ್ ನಿನ್ನ ವೇಟಿಂಗ್ ಲಿಸ್ಟಲ್ಲಿ ನಾನಿದ್ರೂನೂ,
ನೋ ಪ್ರಾಬ್ಲಮ್ ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ಲಾಂಗು ಅಲ್ಲೇ ನಾನು ಜಾಂಡ ಹೂಡ್ತೀನೇ....


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...

ಲವ್ವು ಸ್ಕೂಲಿಗೆ ನೀ ಟೀಚರ್ ಆದರೆ,
ಫ್ರೊಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ,
ರಾಮಂಗಾಗಿ ಸೀತಾ ಶಿವುಗಾಗಿ ಗೀತಾ,
ನಂಗೆ ನೀನು ಸ್ವಂತ, ಬಾ ಮಿಲ್ಟ್ರಿ ಹೋಟ್ಲಲ್ಲಿ ಮುದ್ದೆ ತಿನ್ನೋಣ,

ನೋ ಪ್ರಾಬ್ಲಮ್ ನಿಂಗೆ ಫ್ಲ್ಯಾಶ್ ಬ್ಯಾಕು ಇದ್ರು
ನೋ ಪ್ರಾಬ್ಲಮ್ ನನ್ನ ಎಟಿಮ್ ಮಾಡ್ಕೊಂಡ್ರು
ನೋ ಪ್ರಾಬ್ಲಮ್ ನಿನ್ನ ಮಮ್ಮೀ ಡ್ಯಾಡೀ ನೋ ಅಂದ್ರುನೂ,
ಅವರ ಕಾಲೀಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ,


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ,             ಡಿ...


ನಿನ್ನ ಸೆಲ್ಲಿಗೆ ನಾ ಹೆಡ್‌ಫೋನ್ ಆಗುವೆ,
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ,
ಸಪೋನೋಕಿ ರಾಣಿ ಹತ್ತು ನನ್ನ ದೋಣಿ,
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ...


ನೋ ಪ್ರಾಬ್ಲಮ್ ನಿನ್ನ ಕಲರ್ ಸ್ವಲ್ಪ ಜಾಸ್ತಿನೇ,
ನೋ ಪ್ರಾಬ್ಲಮ್ ನೀ ಅರೇಬೀಯನ್ ಟಗರಾದ್ರು,
ನೋ ಪ್ರಾಬ್ಲಮ್ ನೀನು ಒಪ್ಡೇ ಇಪ್ಡೆ ಇದ್ಬುಟ್ರೆ
ನಾನು ಟೀವೀ ನೈನ್ ಲೈವಲ್ಲಿ ಕೂತು ಬಾಯ್ ಬಡ್ಕೋತೀನೆ...


ಸ್ಟ್ರಾಂಗ್ ಇತ್ತು ನನ್ ಬಾಡೀ, ವೀಕ್ ಆಯ್ತು ನಿನ್ ನೋಡಿ,
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ...

Tuesday, October 27, 2015

Guruvaara Sanje Na Horatidde Lyrics

ಗುರುವಾರ ಸಂಜೆ ನಾ ಹೊರಟಿದ್ದೆ...




ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,
ಬಿದ್ದೆ ಬಿದ್ದೆ ಬಿದ್ದೆ ಎರ್ರಾಬಿರ್ರಿ ಬಿದ್ದೆ, 
ಖಾಲಿ ಹಾರ್ಟು ಡೀಲ್ ಆಗೋಯ್ತು, ನಾನು ಲವ್ವಲ್ಲಿ ಬಿದ್ದೆ,
ಸೀದಾ ಸಾದಾ ಇದ್ದೇ, ಉಲ್ಟಾ ಪಲ್ಟಾ ಆದೆ,
ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,
ನೀನು ಪ್ರೀತಿ ಮಾಡು ಆಗೋದು ಆಗಲಿ..

ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,

ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,
ನೀನು ಪ್ರೀತಿ ಮಾಡು ಆಗೋದು ಆಗಲಿ..

ಜೋರಾಗಿ ಅಳುವ ಕಂದ, ಇವಳನ್ನ ಕಂಡಾಗಿಂದ,
ಬಾಯ್ತುಂಬ ನಗುವ ಚಂದಾ ನೋಡೋ ಗೋವಿಂದ,
ರಾತ್ರೀಲಿ ಕಾಣೋ ಚಂದ್ರ ಹಗಲಲ್ಲೂ ಕಾಣೆ ಆದ,
ಗುಟ್ಟಾಗಿ ಇವಳ ಕೆನ್ನೆಲಿ ಬಚ್ಚಿ ಕೂತ್ಕೊಂಡ,
ಹುಣ್ಣಿಮೆ ಹುಟ್ಟೋದೆ ಇವಳ ಕಣ್ಣಲ್ಲೇ,
ಬೀಸಿದೆ ತಂಗಾಳಿ ಹೋದಲ್ಲೆ,
ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೇ,
ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,
ನೀನು ಪ್ರೀತಿ ಮಾಡು ಆಗೋದು ಆಗಲಿ..


ಸ್ಲೇಟಲ್ಲೀ ಅ ಆ ಇ ಈ ಬರ್ಕೊಟ್ಟು ನನ್ನ ಅಮ್ಮ,
ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ,
ಹಾರ್ಟಲ್ಲಿ ಎಲ್ ಓ ವಿ ಈ ಬರ್ದಿಟ್ಟು ಇವಳು ನಂಗೆ ತಿದ್ದೋಕೆ ಹೇಳಿದಾಳೆ ಇಲ್ಲೆ ಕಣಮ್ಮ,
ಕಾಮನ ಬಿಲ್ಲನ್ನೇ ಕಿತ್ತು ಕೈಯ್ಯಲ್ಲಿ, ನೀಡುವ ಮಾಯಾವಿ ಈ ಮಳ್ಳಿ,
ಮೆಲ್ಲಗೆ ಲೂಟಿ ಆದೆ ನಾನಿಲ್ಲಿ, 
ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,
ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,
ನೀನು ಪ್ರೀತಿ ಮಾಡು ಆಗೋದು ಆಗಲಿ..

ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,

Monday, October 26, 2015

Bisilu Kudure Ondu Lyrics


ಬಿಸಿಲು ಕುದುರೆಯೊಂದು...





















ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ,
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ,
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು,
ನೆನ್ನೆ ಮೊನ್ನೆಗಳ ಎತ್ತಿಡಲೀ ಅನಿಸುವುದು,
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ,
ಆವಳು ಹೋದ ಮೇಲೆ ಬಂದ ನೋವೊಂದೇ ಸುಂದರ,
ಬರೆದುಕೊಂಡೆ ಹಣೆಯ ರಂಗೋಲಿ,
ಇನ್ನೂ ಮುಂದೆ ವಿರಹ ಮಾಮೂಲಿ,
ನನ್ನ ನೆರಳಿಗೂ ದಾರಿ ಮರೆಯುತಿದೆ,
ಕುರುಡು ಕನಸಿಗೆ ನೆನಪೇ ದೀವಟಿಗೆ..

ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ,
ಎಲ್ಲಿಗೋ ಹೊರಟುಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ..

ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ,
ಎಲ್ಲಿಗೋ ಹೊರಟುಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ..

ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ,
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ,

ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೇ ಬಿಟ್ಟ ದೋಣಿ,
ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳೋ ತುಂಬಾ ಮೌನಿ,
ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು,
ನನಗೂ ಗೊತ್ತು ಅವಳು ಬರಳು ನನ್ನ ಸ್ವಪ್ನದಲು..


ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ,
ಎಲ್ಲಿಗೋ ಹೊರಟುಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ..

ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ,
ಎಲ್ಲಿಗೋ ಹೊರಟುಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ..


ಬಿಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ,
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ.....



Nee Jothe Iru Dina Dina Lyrics

ನೀ ಜೊತೆ ಇರು ದಿನ ದಿನ ದಿನ....




















ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,

ಚಂದುಳ್ಳಿ ಚೆಲುವೆ ನೀನು, ಒಂದೊಳ್ಳೆ ಕನಸು ನೀನು,
ನಿನ್ನಲ್ಲೇ ಕಳೆದು ಹೋದೆ, ಏನಂತ ಹುಡುಕಲಿ ನಾನು,
ಒಲವೆಂಬ ಕವನ ನೀನು, ಓದೋಕೆ ಬಂದವ ನಾನು,
ಕಣ್ಣಲ್ಲಿ ಕಣ್ಣು ಇಟ್ಟು ಕಾಯುವೆ ನಿನ್ನ ನಾನು,

ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,

ಏನು ಮಾಡಲಿ ನಿನ್ನ ನೋಡುತ ಏನೋ ಆಗಿದೆ,
ಹೇಗೆ ಹೇಳಲಿ ಎಲ್ಲ ಮಾತಲು ಪ್ರೀತಿ ಆಗಿದೆ,
ನಿನ್ನ ನೋಡುವ ಕಣ್ಣು ಎಂದು ಮುಚ್ಚದೆ ಇರಲಿ,
ಅಪ್ಪಿ ತಪ್ಪಿಯೂ ಅದರ ದಾರಿ ತಪ್ಪದೆ ಇರಲಿ,
ನನಗೆ ಸಿಗುವ ಉಸಿರೊಳಗೆ ಅತಿ ಆಗು ನೀನೇ,
ಬದುಕು ಕಳೆಯೋ ದಿನಗಳಿಗೆ ಜೊತೆಯಾಗು ನೀನೇ..

ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ನನ್ನ ಜೊತೆ ಇರು ದಿನ ದಿನ,

ಏನು ಪುಣ್ಯವು ನಿನ್ನ ನೋಡುವ ಭಾಗ್ಯ ಸಿಕ್ಕಿದೆ,
ಹೆಜ್ಜೆ ಹೆಜ್ಜೆಗೂ ಪ್ರೀತಿ ಮಾಡುವ ಧೈರ್ಯ ಬಂದಿದೆ,
ನೋಡಿ ಒಪ್ಪಿದ ಹೃದಯ, ಎಂದು ಹತ್ತಿರ ಇರಲಿ,
ಅಳತೆ ಸಿಗದೆ ಇರುವ, ಪ್ರೀತಿ ಹಾಗೆಯೇ ಇರಲಿ,
ನಿನಗೂ ನನಗೂ ಉಡುಗೊರೆಯು ಈ ಪ್ರೀತಿ ತಾನೇ,
ಎಲ್ಲ ಇರುವ ಧರೆಯೊಳಗೂ ನನಗೆಲ್ಲಾ ನೀನೇ,

ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ,
ನನ್ನ ಜೊತೆ ಇರು ದಿನ ದಿನ,


Friday, October 23, 2015

Sakhiye Sakhiye lyrics

ಸಖಿಯೇ ಸಖಿಯೇ....





















ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
ಖುಷಿಯೇ ಖುಷಿಯೇ, ನನ್ನ ಎದೆಗೆ ಇಳಿದ ಖುಷಿಯೇ, ನೀ ಯಾರೇ,
ನೀ ನನಗೆ, ನಾ ನಿನಗೆ, ಈ ಜಗವು ನಮಗೇಕೆ,
ನಿನ್ನ ನಗೆ, ಸಾಕೆನಗೆ, ಬೇರೆ ಸುಖ ನಮಗೇಕೆ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

ಅಲ್ಲೇ ನಂಗೀಗ ನೀ ಬರೀ ಸಂಗಾತಿ, ತಾಯಿಯು ನೀ ನನಗೆ,
ಮುದ್ದು ಮುದ್ದಾದ ತಂಟೆಗಳಲ್ಲಿ, ನೀ ಎಳೆಯ ಹೋಗುವೆ,
ಚೆಲುವೆಯೇ ನಂಗೆ ನೀ ವಿಸ್ಮಯ,
ನನ್ನದೇ ದೃಷ್ಟಿ ತಾಕೋ ಭಯ,
ಪರಿ ಪರಿ ನನ್ನ ಈ ಪ್ರೀತಿಯ,
ಕೆಣಕುವೆ ಯಾವ ನ್ಯಾಯ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

ಒಂದು ಗಳಿಗೇನು ನಿಲ್ಲದು ಈ ನಿನ್ನ ಸುಂದರ ಹೂಮುನಿಸು,
ನಿನ್ನ ಹಾಗೇನೇ ಆಡಲು ತುಂಟಾಟ ನೀ ನನಗೂ ಕಲಿಸು,
ಬದಲಿಸಿ ನನ್ನ ಈ ಲೋಕವ,
ನಡೆಸುವೆ ನೀನು ನಿತ್ಯೋತ್ಸವ,
ಕನಸಿಗೂ ಚಂದ ಈ ವಾತ್ಸವ,
ಕುಣಿದಿದೆ ನನ್ನ ಜೀವ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

Wednesday, October 21, 2015

Cheluve Neenu Nakkare Lyrics


ಚೆಲುವೆ ನೀನು ನಕ್ಕರೆ....























ಚೆಲುವೆ ನೀನು ನಕ್ಕರೆ, ಬದುಕು ಹಾಲು ಸಕ್ಕರೆ,
ಚೆಲುವ ನಿನ್ನ ಅಕ್ಕರೆ, ನನ್ನ ಬಾಳ ಸಕ್ಕರೆ,
ನಿನ್ನ ಬಿಟ್ಟಿರಲಾರೆನು,
ನಿನ್ನ ಬಿಟ್ಟಿರಲಾರೆನು,
ಐ ಲವ್ ಯು ಪ್ರತಿ ದಿನವೂ, ಪ್ರತಿ ಕ್ಷಣವೂ, ಪ್ರತಿ ಜನುಮದಲು...

ಚೆಲುವೆ ನೀನು ನಕ್ಕರೆ, ಬದುಕು ಹಾಲು ಸಕ್ಕರೆ...

ಮನಸಿನ ಒಳಗೆ ಮನೆಯನು ಮಾಡಿ ಇರಿಸುವೆನು, ಓ ನಲ್ಲೇ,
ಗುಡಿಸಲೇ ಇರಲಿ ಅರಮನೆ ಇರಲಿ,
ಅನುದಿನವೂ ನಗುತಿರುವೆ,
ಸಿರಿತನವಿರಲಿ, ಬಡತನವಿರಲಿ,ನೆರಳಾಗಿ ನಾನಿರುವೆ,
ಒಲವಿನ ಗೀತೆ ಹಾಡುತಲಿರುವೆ,
ಸಡಗರದಿ ನಾ ಬೆರೆವೆ,
ಹೀಗೆ ನಲಿಯುವೆ,
ನಿನ್ನ ನಲಿಸುವೆ,
ನನ್ನಿನಿಯ, ನನ್ನಿನಿಯ

ಚೆಲುವೆ ನೀನು ನಕ್ಕರೆ, ಬದುಕು ಹಾಲು ಸಕ್ಕರೆ...

ಬದುಕಿನ ಸ್ವರಕೇ ಶ್ರುತಿಯನು ಬೆರೆಸಿ ಹೊಸರಾಗ ನಾ ತರುವೆ,
ನನ್ನೆದೆ ತಾಳ ಹಾಕುತಲಿರಲು ನಾನಾಗ ಮೈಮರೆವೆ,
ಬೆರೆತರೆ ಮನಸು ಬದುಕಿನ ಕನಸು,
ನನಸಾಗಿ ಸೊಗಸಾಗಿ,
ಬಲು ಹಿತವಾಗಿ, ಸವಿಜೇನಾಗಿ,
ಬಾಳೊಂದು ಹೂವಾಗಿ,
ಎಂತ ಪಾವನ,
ನಮ್ಮ ಜೀವನ,
ನನ್ನಿನಿಯ, ನನ್ನಿನಿಯ

ಚೆಲುವೆ ನೀನು ನಕ್ಕರೆ, ಬದುಕು ಹಾಲು ಸಕ್ಕರೆ...
ಚೆಲುವ ನಿನ್ನ ಅಕ್ಕರೆ, ನನ್ನ ಬಾಳ ಸಕ್ಕರೆ,
ನಿನ್ನ ಬಿಟ್ಟಿರಲಾರೆನು,
ನಿನ್ನ ಬಿಟ್ಟಿರಲಾರೆನು,
ಐ ಲವ್ ಯು ಪ್ರತಿ ದಿನವೂ, ಪ್ರತಿ ಕ್ಷಣವೂ, ಪ್ರತಿ ಜನುಮದಲು... 

Karnatakada Itihaasadali Lyrics

ಕರ್ನಾಟಕದ ಇತಿಹಾಸದಲಿ....



ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಕರ್ನಾಟಕದ ಇತಿಹಾಸದಲಿ .....

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿ ಇದು, (x2)
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು, ವಿಜಯನಗರ ಸ್ಥಾಪನೆ ಮಾಡಿದರು...

ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ..
ಹಾಡುವೆ ಕೇಳಿ ನಾ ಹಾಡುವೆ ಕೇಳಿ..

ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವತೆ, (x2)
ಕಲಿಗಳ ನಾಡು ಕವಿಗಳ ಬೀಡು,(x2)
ಎನಿಸಿತು ಹಂಪೆಯು ಆ ದಿನದೇ..
ಕನ್ನಡ ಬಾವುಟ ಹಾರಿಸಿದ, ಮದುರೆವರೆಗೂ ರಾಜ್ಯವ ಹರಡಿಸಿದ,

ಕರ್ನಾಟಕದ ಇತಿಹಾಸದಲಿ.....

ಸಂಗೀತ ನಾಟ್ಯಗಳ ಸಂಗಮವಿಲ್ಲೆ, ಶಿಲ್ಪ ಕಲೆಗಳ ತಾಣವಿದೆ (x2)
ಭುವನೇಶ್ವರಿಯ ತವರೂರಿಲ್ಲೆ, ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು, ಯುಗ ಯುಗ ಅಳಿಯದ ಕೀರ್ತಿ ಇದು...

ಕನ್ನಡ ಭೂಮಿ ...ಕನ್ನಡ ನುಡಿಯು ..ಕನ್ನಡ ಪ್ರೀತಿ ..ಎಂದೆಂದೂ ಬಾಳಲಿ..

ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ..... ಸಿರಿಗನ್ನಡಂ ಗೆಲ್ಗೆ.....