Tuesday, November 3, 2015

Odi bandenu Lyrics

ಓಡಿ ಬಂದೆನು...





















ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,

ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ,

ನೋರೊಂದು ಬಾರಿ ಹರಿದು, ನಾ ಬರೆದ ಓಲೆಯ,
ತುಸುವಾದರೂ ತೆರೆದೊದದೆ, ನೀ ಹಾಗೆ ಹೋದೆಯಾ?
ಕರೆಯೊಂದ ಮಾಡಿಬಿಡಲೆ ಎದೆಯಿಂದ ಈಗಲೇ,
ಪದವಿಲ್ಲದೆ, ಸ್ವರವಿಲ್ಲದೆ ನಿನ್ನನ್ನು ಕೂಗಲೆ,
ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ?

ಕನಸಿಂದ ಚಾಪಿಸಿರುವೆ ಈ ಮನದ ಸಂಚಿಕೆ,
ಮುಖಪುಟವನು ನೀ ನೋಡದೆ, ಮರೆಯಾದೆ ಏತಕೆ,
ನೆನಪಿಂದ ರೂಪಿಸಿರುವೆ ನವಿರಾದ ಸೇತುವೆ,
ನಿನಗಾಗಿಯೇ ಅಣಿಮಾಡುತ, ನಾನಂತೂ ಕಾಯುವೆ,

ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,